

13th May 2025

ಮಲ್ಲಮ್ಮ ನುಡಿ ವಾರ್ತೆ
ಕುಕನೂರ : ಪತ್ರಕರ್ತರಿಗೆ ಭದ್ರತೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಹಗಲಿರುಳು ಶ್ರಮಿಸುತ್ತಿರುವ ಕರ್ನಾಟಕದ ಏಕೈಕ ವ್ಯಕ್ತಿ ಮಲ್ಲಿಕಾರ್ಜುನ ಬಂಗ್ಲೆ ಎಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕಘಟಕದ ಗೌರವ ಅಧ್ಯಕ್ಷ ಮಹೇಶ ಕಲ್ಮಠ ಹೇಳಿದರು.
ಜಿಲ್ಲೆಯ ಕುಕನೂರು ಪಟ್ಟಣದ ಕಾರ್ಯನಿರತ ಪತ್ರಕರ್ತರ ದ್ವನಿ ಕುಕನೂರು ತಾಲೂಕ ಘಟಕದ ಕಾರ್ಯಾಲಯದಲ್ಲಿ ಸದಸ್ಯರಿಗೆ 2025-26 ನೇ ಸಾಲಿನ ಸದಸ್ಯತ ನೊಂದಣಿ ಗುರುತಿನ ಚೀಟಿ ವಿತರಿಸಿ ಮಹೇಶ್ ಕಲ್ಮಠ ಮಾತನಾಡುತ್ತಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರ ನೇತೃತ್ವದಲ್ಲಿ ಇದೆ ಮೇ. 24ರಂದು ಪತ್ರಕರ್ತರ ಚಾರಿ ಟೇಬಲ್ ಟ್ರಸ್ಟ್ ನೋಂದಣಿಯಾಗಿದ್ದು ಪತ್ರಕರ್ತರಿಂದ ಪತ್ರಕರ್ತರಿಗಾಗಿ ನೋಂದಣಿಯಾಗಿರುವ ಟ್ರಸ್ಟ್ ಇದಾಗಿದ್ದು ಈ ಟ್ರಸ್ಟ್ ನಲ್ಲಿ ಜಮಾವಣೆ ಗೊಳ್ಳುವ ಮೊತ್ತವನ್ನು ಪತ್ರಕರ್ತರ ತುರ್ತು ಆರೋಗ್ಯ ಪರಿಸ್ಥಿತಿಯ ಔಷಧೋಪಚಾರ ಸೇರಿದಂತೆ ತುರ್ತು ಪರಿಸ್ಥಿತಿಯ ಅವಶ್ಯಕತೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಅಕಾಲಿಕ ಮೃತ ಹೊಂದಿದ ಪತ್ರಕರ್ತರ ಕುಟುಂಬಕ್ಕೆ ಅಲ್ಪಮಟ್ಟಿನ ಸಹಾಯ ಹಸ್ತ ಚಾಚುವ ಉದ್ದೇಶವನ್ನು ಈ ಟ್ರಸ್ಟ್ ಹೊಂದಿದ್ದು ಇದನ್ನು ಕಾರ್ಯರೂಪಕ್ಕೆ ತಂದಂತಹ ಮಲ್ಲಿಕಾರ್ಜುನ ಬಂಗ್ಲೆ ಅವರಿಗೆ ರಾಜ್ಯದ ಪ್ರತಿಯೊಬ್ಬ ಪತ್ರಿಕರ್ತರ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆಯಲ್ಲಿ ಪ್ರಮುಖರಾದ ವೀರಯ್ಯ ಕುರ್ತಕೋಟಿ ಮಾತನಾಡುತ್ತಾ ಪತ್ರಕರ್ತರ ಹಬ್ಬವಾದ ಕಾರ್ಯನಿರತ ಪತ್ರಕರ್ತರ ಧ್ವನಿ ಮೂರನೇ ರಾಜ್ಯ ಮಟ್ಟದ ಸಮ್ಮೇಳನವನ್ನು ದಿನಾಂಕ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದು ಎಲ್ಲಾ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಕುಕನೂರು ತಾಲೂಕ ಘಟಕದ ಅಧ್ಯಕ್ಷ ಸುನಿಲ್ ಕುಮಾರ ಮಠದ, ಉಪಾಧ್ಯಕ್ಷ ಚಂದ್ರು ಭಾನಪುರ, ಪ್ರಧಾನ ಕಾರ್ಯದರ್ಶಿ ವೀರಯ್ಯ ವಿ ಹಿರೇಮಠ, ಪ್ರಮುಖರಾದ ವಿಶ್ವನಾಥ ಪಟ್ಟಣಶೆಟ್ಟಿ, ಮುತ್ತಯ್ಯ ತೋಂಟದಾರ್ಯ ಮಠ, ಮಲ್ಲಯ್ಯ ಗದಗಿನ, ವಿಶ್ವನಾಥ ಕೋಟೆ ಸೇರಿದಂತೆ ಇನ್ನೇತರರು ಪಾಲ್ಗೊಂಡಿದ್ದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025